(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ತನ್ನ ಗರ್ಲ್‌ಫ್ರೆಂಡ್ ಮದುವೆ ತಪ್ಪಿಸಲು ಆಕೆಯ ಮಾಜಿ ಪ್ರಿಯತಮ ತನ್ನದೇ ಕಿಡ್ನಾಪ್ ಹಾಗೂ ಕೊಲೆಯ ನಾಟಕ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜರುಗಿದೆ.ಶಾಬಾಜ಼್‌ಪುರ ಕಾಲಾ ಎಂಬ ಗ್ರಾಮದ ವಾಸಿಂ ತನ್ನದೇ ಊರಿನ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅದು ಎರಡೂ ಕುಟುಂಬಗಳಿಗೆ ತಿಳಿದಿತ್ತು.
ಜಾತಿಗಳು ಬೇರೆಯಾಗಿದ್ದ ಕಾರಣ ಹುಡುಗಿಯ ಹೆತ್ತವರು ಆಕೆಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಈ ವಿಷಯ ತಿಳಿದ ವಾಸಿಂ ಮದುವೆಯನ್ನು ನಿಲ್ಲಿಸಲು ಪ್ಲಾನ್ ಮಾಡಿದ ವಾಸಿಂ, ತನ್ನದೇ ಅಪಹರಣ ಹಾಗೂ ಕೊಲೆಯ ನಾಟಕವಾಡಿ, ಹುಡುಗಿಯ ಕುಟುಂಬಸ್ಥರನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾನೆ.
ವಾಸಿಂ ಶವವನ್ನು ಪತ್ತೆ ಮಾಡಲು ಮುಂದಾದ ಪೊಲೀಸರು ಶೋಧ ಮುಂದುವರೆಸಿದ್ದಲ್ಲದೇ, ಆತನ ಸ್ನೇಹಿತರನ್ನು ಕಸ್ಟಡಿಗೆ ಪಡೆದು ವಿಚಾರಣೆ ಕೂಡ ನಡೆಸಿದ್ದಾರೆ.ಆ ವೇಳೆ ತನ್ನ ಸಹೋದರಿ ಮನೆಯಲ್ಲಿ ಅವಿತುಕೊಂಡಿದ್ದ ವಾಸಿಂ. ತನ್ನ ಸಹೋದರ ಕೊಲೆಯಾಗಿದ್ದಾನೆ ಎಂದು ತಿಳಿಸಲು ಕುಟುಂಬಸ್ಥರು ಕರೆ ಮಾಡಿದ ವೇಳೆ ಅವರಿಗೆ ವಾಸಿಂ ತನ್ನ ಮನೆಯಲ್ಲಿರುವುದಾಗಿ ಆಕೆ ತಿಳಿಸಿದ್ದಾರೆ. ಕೂಡಲೇ ವಾಸಿಂನನ್ನು ಪೊಲೀಸರು ಬಂಧಿಸಿದ್ದಾರೆ.