ಕಿಚ್ಚನ ಪ್ರಚಾರದ ವಿರುದ್ಧ ಟೀಕಿಸಿ ಮಾತಡಿದ ಮಾಜಿ ಶಾಸಕರ ಪುತ್ರ ➤ ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಗಳ ಪರ್ವವೇ ನಡೆಯಲು ಆರಂಭಿಸಿತು. ಬಿಜೆಪಿಯನ್ನು ತೊರೆದು ಶೆಟ್ಟರ್‌ ಕಾಂಗ್ರೇಸ್‌ ಕೈ ಹಿಡಿದರು. ಲಕ್ಷ್ಮಣ ಸವದಿ ಸಹ ಬಿಜೆಪಿ ಬಿಟ್ಟು ಕಾಂಗ್ರೇಸ್‌ ಸೇರಿಕೊಂಡರು. ಕೈ ಸೇರಿಕೊಂಡ ಶೆಟ್ಟರ್‌ ಅವರನ್ನು ಬಿಜೆಪಿ ಪಕ್ಷ ಎಂದಿಗೂ ಕ್ಷಮಿಸುವುದಿಲ್ಲ, ನಂಬಿಕೆ ದ್ರೋಹಿ ಎಂದೆಲ್ಲಾ ಆರೋಪಿಸಿ ಅವರ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಇದಲ್ಲದೇ ಶೆಟ್ಟರ್‌ ಸಹ ಬಿಜೆಪಿ ಲಿಂಗಾಯತ ವಿರೋಧಿ ಎಂದು ಆರೋಪಿಸಿದ್ದಾರೆ. ಈ ಆರೋಪದಿಂದ ಬಿಜೆಪಿ ನಿರ್ಣಾಯಕ ಮತದಿಂದ ಶೆಟ್ಟರ್‌ ವಿರುಧ್ಧ ಗೆಲ್ಲುವುದು ಒಂದು ದೊಡ್ಡ ಸವಾಲು.ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್‌ ತಾನು ಬಿಜೆಪಿ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿಯವುದಾಗಿ ಹೇಳಿದ್ದರು.ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್‌ ಹಲವೆಡೆಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಮಾಜಿ ಶಾಸಕರ ಪುತ್ರ ಟೀಕಿಸಿ ಮಾತನಾಡಿದ್ದಾನೆ. ಈ ವಿಚಾರವಾಗಿ ಕಿಚ್ಚ ಸುದೀಪ್‌ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

Also Read  ಸೆ.2ರವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ   ಆರೆಂಜ್ ಅಲರ್ಟ್ ಘೋಷಣೆ      

 

 

 

error: Content is protected !!
Scroll to Top