ಈಜಲು ತೆರಳಿದ್ದ ಐವರು ನೀರುಪಾಲು

(ನ್ಯೂಸ್ ಕಡಬ) newskadaba.com.ಮಂಡ್ಯ, ಏ.26. ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ನಡೆದಿದೆ.  ಬೆಂಗಳೂರಿನ ನೀಲಸಂದ್ರ ಮೂಲದ ನಿವಾಸಿಗಳಾದ ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಮೃತರು ಎಂದು ಗುರುತಿಸಲಾಗಿದೆ.

ಇವರು ರಂಝಾನ್ ಬಳಿಕ ರಜೆಗೆಂದು ಹಲ್ಲಗೆರೆಯ ಅಜ್ಜಿ ಮನೆಗೆ ಬಂದಿದ್ದರು. ಈ ವೇಳೆ ಈಜಲು ಹೋಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳನ್ನು ವಿಸಿ ನಾಲೆಯಿಂದ ಹೊರ ತೆಗೆಯಲಾಗಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Scroll to Top