ಮುಸ್ಲಿಮರ 2b ಮೀಸಲಾತಿ ರದ್ಧತಿಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.25. ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದತಿ ಕುರಿತ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ ಮೀಸಲಾತಿ ರದ್ಧತಿಗೆ ತಾತ್ಕಾಲಿಕ ತಡೆ‌ ನೀಡಿದೆ.


ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರ ನೇತೃತ್ವದ ಪೀಠ ಈ ಕುರಿತ ವಿಚಾರಣೆಯನ್ನು ಮೇ.9ರವರೆಗೆ ಮುಂದೂಡಿದ್ದು, ಆವರೆಗೆ ಆದೇಶದ ಅನ್ವಯ ಮೀಸಲಾತಿ ಮೊಟಕುಗೊಳಿಸಿ ಯಾವುದೇ ನೇಮಕಾತಿ, ದಾಖಲಾತಿ ಮಾಡಬಾರದು ಎಂದು ತಿಳಿಸಿದೆ.

Scroll to Top