ಭಾರತೀಯ ಪಾಸ್‍ಪೋರ್ಟ್  ಬಳಸಿ ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳ ಬಂಧನ

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.8.   ಅಕ್ರಮವಾಗಿ ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸರು ಬಂಧಿಸಿದ್ದಾರೆ.

ಸಿಂಗಾಪುರ್‍ ನಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನದಲ್ಲಿ ಬಾಂಗ್ಲಾ ದೇಶದ ಪ್ರಜೆಗಳಾದ ಲಿಯಾಕತ್ ಆಲಿ ಮತ್ತು ರಿಜಾಉಲ್ ಶೇಕ್ ಎಂಬುವರು ಬಂದಿದ್ದಾರೆ. ವಿಮಾನ ನಿಲ್ದಾಣದ ಅಕಾರಿಗಳು ಈ ಇಬ್ಬರ ಪಾಸ್‍ಪೋರ್ಟ್‍ಗಳನ್ನು ಪರಿಶೀಲಿಸಿದಾಗ ಬೇರೆಯವರ ಹೆಸರಿನಲ್ಲಿ ಮೋಸದಿಂದ ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಂಡಿರುವುದು ಕಂಡು ಬಂದಿದೆ.

Scroll to Top