ಪೊಲೀಸ್ ಕಮಿಷನರ್ ನಡುವೆ ವಾಗ್ವಾದ ➤ 8 ಮಂದಿ ವಿರುದ್ಧ ಪ್ರಕರಣ

(ನ್ಯೂಸ್ ಕಡಬ)newskadaba.com ಕಲಬುರಗಿ, ಏ.08. ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಹುಸೇನ್‌ ಉಸ್ತಾದ ಹಾಗೂ‌ ಪೊಲೀಸ್ ಕಮಿಷನರ್ ಚೇತನ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.


ಘಟನೆ ಸಂಬಂಧ ನಾಸೀರ್ ಹುಸೇನ್ ಉಸ್ತಾದ ಸೇರಿ 8 ಜನರ ವಿರುದ್ಧ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಸೀರ್ ಹುಸೇನ್ ಉಸ್ತಾದ ಎ1 ಆರೋಪಿ ಎಂದು ಹೆಸರಿಸಲಾಗಿದೆ. ಇನ್ನುಳಿದಂತೆ ಅಫ್ಜಲ್ ಮಹಿಮ್ಮದ್, ಶಫಿ ಪಟೇಲ್, ಮುದಾಸಿರ್, ಗೌಸ್ ಭಾಗವಾನ್, ಮಜರ್ ಲಾತೋರೆ, ತಲಾಹ್ ಮತ್ತು ಸೋಹೆಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು‌ ಕ್ರಮ ಕೈಗೊಳ್ಳಲಾಗಿದೆ.

Scroll to Top