ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ

(ನ್ಯೂಸ್ ಕಡಬ)newskadaba.com ವಿಶಾಖಪಟ್ಟಣಂ, ಏ.06. ಎರಡು ತೆಲುಗು ರಾಷ್ಟ್ರಗಳನ್ನು ಸಂಧಿಸುವ ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಲಾಗಿದೆ. ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ಮಧ್ಯೆ ಮೂರು ತಿಂಗಳ ಹಿಂದೆ ಆರಂಭವಾದ ಈ ರೈಲಿಗೆ ಮೂರನೇ ಬಾರಿಗೆ ಕಲ್ಲು ತೂರಾಟ ನಡೆಸಿದ್ದರಿಂದ ಕಿಟಿಕಿಯ ಗಾಜು ಜಖಂಗೊಂಡಿದೆ.


ವಿಶಾಖಪಟ್ಟಣದಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಹೊರಡಬೇಕಿತ್ತು. ನಿಗದಿತ ನಿರ್ಗಮನಕ್ಕೂ ಮೊದಲು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ರೈಲನ್ನು 9:45 ಗಂಟೆಗೆ ಮರು ನಿಗದಿಪಡಿಸಲಾಯಿತು. ಕಲ್ಲೇಟಿನಿಂದ ರೈಲಿನ ಸಿ-8 ಕೋಚ್’ನ ಕಿಟಕಿಯ ಗಾಜು ಒಡೆದು ಹೋಗಿದೆ ಎಂದು ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ.

Also Read  ಏಷ್ಯನ್ ಗೇಮ್ಸ್- ಮೊದಲ ದಿನವೇ ಭಾರತಕ್ಕೆ ಚಿನ್ನದ ಪದಕ ತಂದ ಶೂಟಿಂಗ್ ತಂಡ

 

error: Content is protected !!
Scroll to Top