ವೃದ್ದೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರ ಕೊಲೆ

(ನ್ಯೂಸ್ ಕಡಬ)newskadaba.com ಹಾಸನ, ಏ.06. ಹಾಸನ ಜಿಲ್ಲೆಯಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ವೃದ್ದೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.

ಮಿಥುನ್ ಕುಮಾರ್ (32) ಎಂಬಾತ ಇಂತಹ ಹೀನ ಕೃತ್ಯ ಎಸಗಿದ್ದು, ಸದ್ಯ ಪೊಲೀಸರು ಈತನನ್ನು ಹೆಡೆಮುರಿಕಟ್ಟಿದ್ದಾರೆ. ಮನೆಯಿಂದ ಹೊರಗಡೆ ಹೋಗಿದ್ದ ತಾಯಿ ಇನ್ನೂ ಕೂಡ ಮನೆಗೆ ಬಂದಿಲ್ಲ ಎಂದು ಮಗಳು ಪೊಲೀಸರಿಗೆ ದೂರು ನೀಡಿದ್ದರು. ನಂತರ ಜಮೀನನಲ್ಲಿ ವೃದ್ದೆಯ ಶವ ಪತ್ತೆಯಾಗಿತ್ತು. ನಂತರ ಪೊಲೀಸರು ತನಿಖೆಗಿಳಿದಾಗ ಮಿಥುನ್ ನ ನೀಚ ಕೃತ್ಯ ಬಯಲಾಗಿದೆ.

 

Scroll to Top