ಮಣಿಪಾಲ: ಸೂಕ್ತ ದಾಖಲಾತಿ  ಇಲ್ಲದೆ  ಭತ್ತ ತುಂಬಿದ ಗೋಣಿ ಚೀಲ ಸಾಗಾಟ!!   ➤ಆರೋಪಿಗಳು ಪೊಲೀಸರ ವಶಕ್ಕೆ.!!

(ನ್ಯೂಸ್ ಕಡಬ)Newskadaba.com ಮಣಿಪಾಲ,ಏ.06  ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ರುಕ್ಮ ನಾಯ್ಕ್‌ ದಿಡೀರ್‌ ವಾಹನ ತಪಾಸಣೆ ನಡೆಸುವ ವೇಳೆ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ KA-31-4536 ಲಾರಿಯ ಚಾಲಕ ಡೇನಿಲ್‌ ಆಂತೋನಿ ಫರ್ನಾಂಡೀಸ್‌ ಎಂಬಾತ ಹಳಿಯಾಳದಿಂದ ಬೆಳ್ತಂಗಡಿ ತಾಲೂಕಿನ ಮಾರುತಿಪುರದ ಅಕ್ಕಿ ಮಿಲ್‌ ಗೆ ಸಮರ್ಪಕವಾದ ದಾಖಲಾತಿ ಭತ್ತ ಸಾಗಿಸುತ್ತಿರುವುದು ಕಂಡುಬಂದಿದೆ.

ಗರಿಷ್ಟ 100 ಮೂಟೆ ಭತ್ತ ತುಂಬಿದ ಗೋಣಿ ಚೀಲ ಸಾಗಾಟ ಮಾಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ. ಸಮರ್ಪಕವಾದ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ತುಂಬಿದ ಗೋಣಿ ಚೀಲವನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 

 

 

 

 

 

Scroll to Top