ಮದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ಸಾಧ್ಯತೆ

 (ನ್ಯೂಸ್ ಕಡಬ)newskadaba.com ಚೆನ್ನೈ, ಏ.05. ಹುಲಿ ಸಂರಕ್ಷಿತ ಪ್ರದೇಶದ (ಎಂಟಿಆರ್) ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕಾರಣದಿಂದ ಏಪ್ರಿಲ್‌ 06ರಿಂದ 09ರವರೆಗೆ ಶಿಬಿರಕ್ಕೆ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.

ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಆಸ್ಕರ್ ವಿಜೇತ ಸಾಕ್ಷ್ಯಚಿತ್ರ – ದಿ ಎಲಿಫೆಂಟ್ ವಿಸ್ಪರರ್ಸ್‌ನ ತಾರೆಗಳಾದ ಬೊಮ್ಮನ್ ಮತ್ತು ಅವರ ಪತ್ನಿ ಬೆಲ್ಲಿ ಅವರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.

 

ಈ ಅವಧಿಯಲ್ಲಿ ಎಲ್ಲಾ ವಿಶ್ರಾಂತಿ ಗೃಹಗಳು, ಅತಿಥಿ ಗೃಹಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುತ್ತದೆ. ಪ್ರಧಾನಿ ಭೇಟಿ ಕಾರಣ ಏಪ್ರಿಲ್ 06ರಿಂದ 09ರವರೆಗೆ ತೆಪ್ಪಕಾಡು ಆನೆ ಶಿಬಿರ ಬಂದ್ ಆಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ ಎನ್ನಲಾಗಿದೆ.

Also Read  ಲಾರಿಯಲ್ಲಿ ಸಾಗಿಸುತ್ತಿದ್ದ 24ಕ್ಕೂ ಹೆಚ್ಚು ಜಾನುವಾರು ರಕ್ಷಣೆ ➤ ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ

 

 

error: Content is protected !!
Scroll to Top