ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಕಿಚ್ಚ ಸುದೀಪ್‌ ಗೆ ಬೆದರಿಕೆ ➤ ಆರೋಪಿ ವಿರುದ್ಧ FIR ದಾಖಲು

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.05. ಕಿಚ್ಚ ಸುದೀಪ್‌ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರಿಂದ ಬೆದರಿಕೆ ಪತ್ರ ಬಂದಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಕಿಚ್ಚ ಸುದೀಪ್‌ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರವೊಂದು ಬಂದಿದೆ.

ಕಿಚ್ಚ ಅವರ ಆಪ್ತ, ನಿರ್ಮಾಪಕ ಜಾಕ್‌ ಮಂಜು ಅವರಿಗೆ ಈ ಪತ್ರ ಸಿಕ್ಕಿದ್ದು, ಇದರಲ್ಲಿ ಕಿಚ್ಚನಿಗೆ ಅನಾಮಧೇಯ ವ್ಯಕ್ತಿ, ಖಾಸಗಿ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬರೆದು ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ.

 

Scroll to Top