(ನ್ಯೂಸ್ ಕಡಬ) newskadaba.com ಮಂಗಳೂರು, ಏ. 04. ಕಳ್ಳನೋರ್ವ ನಗರದ ದಕ್ಕೆಯಲ್ಲಿ ಮೀನು ವ್ಯಾಪಾರಿಯ 1.50 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ವರದಿಯಾಗಿದೆ.
ವ್ಯಾಪಾರಿಯು ಮೀನು ಖರೀದಿಗೆಂದು ದಕ್ಕೆಯ ಕಡೆಗೆ ತೆರಳುತ್ತಿದ್ದ ವೇಳೆ, ಅವರಲ್ಲಿ ಮೀನು ಖರೀದಿಗೆಂದು ಇಟ್ಟಿದ್ದ 1.50 ಲಕ್ಷ ರೂ. ಹಣವಿತ್ತು. ಆದರೆ, ಕಳ್ಳನು ಈ ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ಕಳ್ಳನ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.