ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ 250ಕ್ಕೂ ಅಧಿಕ ಪೊಲೀಸರ ಭೇಟಿ ➤ ಕೈದಿಗಳ ಬಗ್ಗೆ ತಪಾಸಣೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಏ.03. ಕೋಡಿಯಾಲ್ ಬೈಲ್‌ ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಬೇಟಿ ನೀಡಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸುಮಾರು 250ಕ್ಕೂ ಅಧಿಕ ಪೊಲೀಸರು ಏಕಕಾಲಕ್ಕೆ ಜೈಲಿನಲ್ಲಿ ಕೈದಿಗಳ ತಪಾಸಣೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ, ಡಿಸಿಪಿ ಅಂಶುಕುಮಾರ್ ಸಹಿತ ಹಿರಿಯ ಅಧಿಕಾರಿಗಳು ತಪಾಸಣೆ ಮಾಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಕೈದಿಗಳ ಚಲನವಲನ ಹಾಗೂ ಕೈದಿಗಳ ಬಗ್ಗೆ ತಪಾಸಣೆ ನಡೆಸಿದ್ದಾರೆ.

Also Read  ಅಡೆಂಜ: ಶಾಲಾ ಸುವರ್ಣ ಮಹೋತ್ಸವ ಉದ್ಘಾಟನೆ► ರಾಷ್ಟ್ರ ನಿರ್ಮಾಣ, ರಕ್ಷಣೆಯ ಶಿಕ್ಷಣ ಅಗತ್ಯ - ನಳಿನ್ ಕುಮಾರ್ ಕಟೀಲ್

 

error: Content is protected !!
Scroll to Top