ಕಾಂಗ್ರೆಸ್ ನ 23 ವರ್ಷದ ತ್ರಿವೇಣಿ ನೂತನ ಮೇಯರ್ ➤ ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ

(ನ್ಯೂಸ್ ಕಡಬ)newskadaba.com ಬಳ್ಳಾರಿ, ಮಾ.30. ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಡಿ.ತ್ರಿವೇಣಿ ಆಯ್ಕೆಯಾಗಿದ್ದು ಉಪ ಮೇಯರ್ ಆಗಿ ಬಿ‌.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ತ್ರಿವೇಣಿ ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಬಳ್ಳಾರಿ ಮಹಾನಗರ ಪಾಲಿಕೆಗೆ ಇಂದು ಚುನಾವಣೆ ನಡೆಯಿತು‌. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಿತ್ತು. ಇನ್ನು ಪಾಲಿಕೆಯಲ್ಲಿ 39 ಸದಸ್ಯರಿದ್ದು, ಸಂಸದರು, ಶಾಸಕರ ಮತಗಳಿಂದ ಬಿಜೆಪಿ 16 ಮತಗಳನ್ನು ಹೊಂದಿದ್ದರೆ ಕಾಂಗ್ರೆಸ್ 28 ಮತಗಳನ್ನು ಹೊಂದಿತ್ತು.

Scroll to Top