ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಕುಮಾರಧಾರಾ ನದಿಯಲ್ಲಿ ಪತ್ತೆ ➤ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.30. ಟ್ಯೂಷನ್ ಗೆಂದು ತೆರಳಿ ನಾಪತ್ತೆಯಾಗಿದ್ದ ಹತ್ತನೇ ತರಗತಿಯ ಬಾಲಕನ ಮೃತದೇಹವು ಕುಮಾರಧಾರಾ ನದಿಯ ನಾಕೂರು ಗಯ ಎಂಬಲ್ಲಿ ಗುರುವಾರದಂದು ಪತ್ತೆಯಾಗಿದೆ.

ಕಡಬದ ಖಾಸಗಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಎಂಬಾತ ಬುಧವಾರದಂದು ಟ್ಯೂಷನ್ ಗೆಂದು ತೆರಳಿ ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾನೆ. ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಕಂಡುಬಂದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಡಿದಾಗ ಮೃತದೇಹವು ಪತ್ತೆಯಾಗಿದೆ. ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

 

Scroll to Top