ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ.!

(ನ್ಯೂಸ್ ಕಡಬ)newskadaba.com ಮಾ.28. ಬಿರಿಯಾನಿಗಳಲ್ಲಿ ಹಲವು ವಿಧಗಳಿದ್ದು, ವಿಶೇಷವಾದ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥಗಳು:
1 ಕೆ.ಜಿ. ಕೋಳಿ ಮಾಂಸ, ½ ಕೆ.ಜಿ. ಬಾಸ್ಮತಿ ಅಕ್ಕಿ, 100 ಗ್ರಾಂ ಈರುಳ್ಳಿ, 1 ಕಟ್ಟು ಪುದಿನ, 25 ಗ್ರಾಂ ಗರಂ ಮಸಾಲೆ, 3 ಟೇಬಲ್ ಸ್ಪೂನ್ ರುಬ್ಬಿದ ಶುಂಠಿ ಹಾಗೂ ಬೆಳ್ಳುಳ್ಳಿ, 100 ಗ್ರಾಂ ಗಸಗಸೆ, 1 ಕಟ್ಟು ಕೊತಂಬರಿ ಸೊಪ್ಪು, 200 ಮಿ.ಲೀ. ತುಪ್ಪ, 1 ಚಮಚ ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.


ತಯಾರಿಸುವ ವಿಧಾನ:
ಗಸಗಸೆ, ಪುದಿನ, ಕೊತಂಬರಿ ಸೊಪ್ಪು, ಗರಂ ಮಸಾಲೆ ರುಬ್ಬಿಕೊಳ್ಳಿರಿ. ಕೋಳಿ ಮಾಂಸವನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಸ್ವಲ್ಪ ತುಪ್ಪದಲ್ಲಿ ಕೆಂಪಗೆ ಹುರಿಯಿರಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಕೋಳಿ ಮಾಂಸವನ್ನು ಬೆರೆಸಿ, ಸ್ವಲ್ಪ ನೀರನ್ನು ಹಾಕಿರಿ.
ಅರ್ಧ ಬೆಂದ ಬಳಿಕ, ಅದಕ್ಕೆ ರುಬ್ಬಿದ ಮಸಾಲೆ ಮತ್ತು ರುಬ್ಬಿದ ಬೆಳ್ಳುಳ್ಳಿ, ಶುಂಠಿ ಹಾಕಿರಿ. ರುಚಿಗೆ ತಕ್ಕಷ್ಟು ಉಪ್ಪು, ಕರಿ ಮೆಣಸಿನ ಪುಡಿಯನ್ನು ಹಾಕಿ.
ಮೊದಲೇ ಬೇಯಿಸಿಟ್ಟುಕೊಂಡಿದ್ದ ಬಾಸ್ಮತಿ ಅಕ್ಕಿ ಹಾಕಿ, ತುಪ್ಪ ಹಾಕಿ ನೀರೆಲ್ಲಾ ಇಂಗುವವರೆಗೆ ಚೆನ್ನಾಗಿ ಬೇಯಿಸಿ ಕಲೆಸಿ. ಮೇಲೊಂದು ತಟ್ಟೆಯನ್ನು ಮುಚ್ಚಿ ಭಾರ ಹೇರಿ, ಸ್ವಲ್ಪ ಕೆಂಡವನ್ನು ಹಾಕಿ ಕೆಲ ಸಮಯ ಬಿಡಿ. ನಿಮಗೆ ಬಾಯಿ ಚಪ್ಪರಿಸಲು ಹೈದರಾಬಾದಿ ಬಿರಿಯಾನಿ ಸಿದ್ಧವಾಗಿರುತ್ತದೆ.

Also Read  ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು

error: Content is protected !!
Scroll to Top