27 ವರ್ಷದ ವಿವಾಹಿತೆ ನಾಪತ್ತೆ

(ನ್ಯೂಸ್ ಕಡಬ)newskadaba.com  ಶಿರ್ವ, ಮಾ.23. ಬೆಳಪು ಬದ್ರಿಯಾ ಮಸೀದಿ ಬಳಿ, ಬಾಡಿಗೆ ಮನೆ ನಿವಾಸಿ ಕರಿಶ್ಮಾ ಬಾನು (27) ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ತನ್ನ ಇಬ್ಬರು ಮಕ್ಕಳ ಜತೆ ಅಲ್ಲಿಯೇ ಹತ್ತಿರ ಇರುವ ಅತ್ತೆ ಮನೆಗೆ ಹೋಗಿದ್ದು, ಅಲ್ಲಿಂದ ಮಕ್ಕಳನ್ನು ಅತ್ತೆ ಮನೆಯಲ್ಲಿಯೇ ಬಿಟ್ಟು ಒಬ್ಬಳೇ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಮನೆಯಲ್ಲಿದ್ದ ಆಕೆಯ ಬಟ್ಟೆಬರೆ, ಚಿನ್ನಾಭರಣ, ನಗದು, ಆಕೆಯ ದಾಖಲಾತಿ ನಾಪತ್ತೆಯಾಗಿದ್ದು, ಬ್ಯಾಗ್‌ ಸಹ ಇಲ್ಲವಾಗಿದೆ.

Also Read  ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸ್..? ➤ ಸುಳಿವು ಬಿಟ್ಟುಕೊಟ್ಟ BSY

 

error: Content is protected !!