ಚೆಕ್‌ ಅಮಾನ್ಯ ಪ್ರಕರಣ    ➤ 6 5.69 ಲಕ್ಷ ರೂ. ದಂಡ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಮಾ.22. ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಮರು ಪಾವತಿಸದ ಆರೋಪಿಗೆ ಬಂಟ್ವಾಳ ನ್ಯಾಯಾಲಯ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ 5,69,500 ರೂ. ದಂಡ ವಿಧಿಸಿ ಆದೇಶ ನೀಡಿದೆ.

ಪಂಜಿಕಲ್ಲು ನಿವಾಸಿ ಪದ್ಮನಾಭ ಮಡಿವಾಳ ಆರೋಪಿಯಾಗಿದ್ದು, ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸಿರಲಿಲ್ಲ. ಬ್ಯಾಂಕಿಗೆ ಅವರು ನೀಡಿದ ಚೆಕ್‌ ಕೂಡ ಅಮಾನ್ಯಗೊಂಡಿದ್ದು, ಹೀಗಾಗಿ ಬ್ಯಾಂಕ್‌ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.

 

Scroll to Top