(ನ್ಯೂಸ್ ಕಡಬ)newskadaba.com ದೋಹಾ, ಮಾ.22. ಅರಳುವ ಕನಸು ಉತ್ಸಾಹದ ಬೆಳಕು ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ಸಮಿತಿ ವತಿಯಿಂ ಪ್ರತಿಭೋತ್ಸವ 2k23 ದಿನಾಂಕ 17-03-2023 ರಂದು ದೋಹಾದ ಐಐಸಿಸಿ ಸಭಾಂಗಣದಲ್ಲಿ ನಡೆಯಿತು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಐಸಿಎಫ್ ನಾಯಕರಾದ ಸಲಾಂ ಹಾಜಿ ಪಾಪಿನಶ್ಯೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಸಿಎಫ್ ನಡೆಸುವ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದ್ದು ಅನಿವಾಸಿ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೊಲ್ಲಿ ರಾಷ್ಟ್ರಗಳಾದ್ಯಂತ ಕೆ.ಸಿ.ಎಫ್ ಹಮ್ಮಿಕ್ಕೊಂಡ ಪ್ರತಿಭೋತ್ಸವವು ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಚರು.
ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೆರ್ ಅಸೋಸಿಯೇಶನ್ ಖತ್ತರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಪೂತ್ತೂರು, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ ಖತ್ತರ್ ಅಧ್ಯಕ್ಷರಾದ ಫಯಾಝ್, ICBF ಖತ್ತರ್ ಕಾರ್ಯಕಾರಿ ಸಮಿತಿ ಸದಸ್ಯರಾದ ದೀಪಕ್ ಶೆಟ್ಟಿ ಮುಂತಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಕಬೀರ್ ದೇರಳಕಟ್ಟೆ, ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಯೂಸುಫ್ ಸಖಾಫಿ ಅಯ್ಯಂಗೇರಿ, ಅಲ್’ಮದೀನಾ ಮಂಜನಾಡಿ ಖತ್ತರ್ ಸಮಿತಿ ಅಧ್ಯಕ್ಷರಾದ ಹಾಜಿ ಅರಬಿ ಕುಙ್ಞಿ,ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಮಾಗುಂಡಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಖತ್ತರ್ ಅಧ್ಯಕ್ಷರಾದ ಸುಲೈಮಾನ್ ಮುನ್ಕೂರು, ಐಸಿಎಫ್ ನಾಯಕರಾದ ಜಮಾಲ್ ಅಝ್ಹರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಭಾಗವಾಗಿ ಮಕ್ಕಳನ್ನೊಳಗೊಂಡ ವಿವಿಧ ಪ್ರತಿಭೆಗಳಿಂದ ಭಾಷಣ, ಹಾಡು, ಕ್ವಿಝ್, ಹಿಫ್ಳ್ ಖುರ್’ಆನ್, ಚರ್ಚಾಗೋಷ್ಠಿ, ದಫ್ ಎಂಬಿತ್ಯಾದಿ ಕಲಾ ವಿಭಾಗಗಳಲ್ಲಿ ನಡೆದ ಸ್ಪರ್ಧೆಯು ನೆರೆದಿರುವ ಅತಿಥಿಗಳು ಹಾಗೂ ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು. ವೈಯುಕ್ತಿಕ ಕಲಾ ಪ್ರತಿಭೆಯಾಗಿ ರಿಯಾಝ್ ಉಜಿರೆ (ಮದೀನ ಖಲೀಫಾ ಝೋನ್) ಹೊರಹೊಮ್ಮಿದರೆ, ಮೂರು ಝೋನ್ ಗಳ ನಡುವೆ ನಡೆದ ಕಲಾ ಸ್ಪರ್ಧೆಯಲ್ಲಿ ದೋಹಾ ಝೋನ್ ಪ್ರಥಮ ಸ್ಥಾನಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಸ್ವಾಗತಿಸಿ, ಪ್ರತಿಭೋತ್ಸವ ಸಮಿತಿ ಕನ್ವೀನರ್ ಫಾರೂಖ್ ಜೆಪ್ಪು ವಂದಿಸಿದರು. ರಿಝ್ವಾನ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.