(ನ್ಯೂಸ್ ಕಡಬ) newskadaba.com ಉಡುಪಿ, ಮಾ. 21. ಆನ್ ಲೈನ್ ಉದ್ಯೋಗದ ಆಮಿಷ ಒಡ್ಡಿ ಮಹಿಳೆಯೋರ್ವರಿಗೆ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉದ್ಯೋಗದ ಹುಡುಕಾಟದಲ್ಲಿದ್ದ ಮಾಧವಿ ಎಂಬವರಿಗೆ ಮಾರ್ಚ್ 15ರಂದು ವಾಟ್ಸಪ್ ನಲ್ಲಿ ಅಪರಿಚಿತ ನೊರ್ವ ಆನ್ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ, ಮಾರ್ಚ್ 15ರಿಂದ ಮಾರ್ಚ್ 20ರವರೆಗೆ 2,52,600 ರೂ. ಗಳನ್ನು ಆರೋಪಿಯ ವಿವಿಧ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾನೆ. ಆದರೆ ಬಳಿಕ ಉದ್ಯೋಗ ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.