ಹಂಪ್ ಮೇಲೆ ಹಾರಿದ ಬಸ್- ಪ್ರಯಾಣಿಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. ಹಂಪ್‌ನಲ್ಲಿ ಬಸ್‌ ಮೇಲಕ್ಕೆ ಹಾರಿಬಿದ್ದ ಪರಿಣಾಮ ಬಸ್‌ ಪ್ರಯಾಣಿಕನೋರ್ವ ಗಂಭೀರ ಗಾಯಗೊಂಡ ಘಟನೆ ವಾಮಂಜೂರು ಸಮೀಪ ನಡೆದಿದೆ.

ಗಂಭೀರ ಗಾಯಗೊಂಡವರನ್ನು ಪ್ರದೀಶ್‌ (50) ಎಂದು ಗುರುತಿಸಲಾಗಿದೆ. ಅವರು ಬಿ.ಸಿ.ರೋಡ್‌ ಕಡೆಗೆ ಹೋಗಲು ಮೂಡುಶೆಡ್ಡೆಯಿಂದ ಮಂಗಳೂರು ಕಡೆಗೆ ಹೋಗುವ ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದರು. ಬಸ್ ವಾಮಂಜೂರಿನ ಆರ್‌ಟಿಒ ಸ್ಟಾಪ್‌ ಬಳಿ ಬರುತ್ತಿದ್ದಂತೆಯೇ ಚಾಲಕ ಹಂಪ್‌ ಮೇಲೆ ಹಾರಿಸಿಕೊಂಡು ಹೋದ ಪರಿಣಾಮ ಪ್ರದೀಶ್‌ ಅವರು ಬಸ್ಸಿನೊಳಗೆ ಬಿದ್ದು ಅವರಿಗೆ ಕಬ್ಬಿಣದ ರಾಡ್‌ ತಾಗಿದೆ. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top