ಗಗನಸಖಿಯಾಗಿ ನೇಮಕಗೊಂಡ ಕಡಬದ ರಕ್ಷಾ ಎಸ್

(ನ್ಯೂಸ್ ಕಡಬ) newskadaba.com ಕಡಬ, ಮಾ. 18. ತಾಲೂಕು ಕೊಣಾಲು ಗ್ರಾಮದ ಆರ್ಲ ನಿವಾಸಿ ರಕ್ಷಾ ಯಸ್.ರವರು ‘ಗೋ ಫಸ್ಟ್’ ವಿಮಾನದಲ್ಲಿ ಗಗನಸಖಿಯಾಗಿ ನೇಮಕಗೊಂಡಿದ್ದಾರೆ.

ಗಗನಸಖಿ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ರಕ್ಷಾ ಅವರು, ಬೆಂಗಳೂರಿನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಆಯ್ಕೆಗೊಂಡಿದ್ದರು. ಬಳಿಕ 6 ತಿಂಗಳ ತರಬೇತಿ ಮುಗಿಸಿದ ಅವರು ಇದೀಗ ಗೋ ಫಸ್ಟ್ ವಿಮಾನದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣ ಮುಗಿಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದಿರುತ್ತಾರೆ. ಈಕೆ ಕೊಣಾಲು ಗ್ರಾಮದ ಆರ್ಲ ಸುರಕ್ಷಾ ನಿಲಯದ ಸುಂದರ ಗೌಡ ಹಾಗೂ ಶ್ರೀಮತಿ ರೇವತಿ ಸುಂದರ ದಂಪತಿ ಪುತ್ರಿ.

Scroll to Top