ವಿಟ್ಲ: ಸಾಲಭಾದೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 17. ಸಾಲಭಾದೆಯಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೋಲ್ಪೆ ಬಂಗಾರಕೋಡಿ ನಿವಾಸಿ ವೀರಪ್ಪ ಗೌಡ (55) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಇವರು ಸಾಲಭಾದೆಯಿಂದ ಮನನೊಂದು ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

Scroll to Top