ಬೆಂಗಳೂರಿನಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ.!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.16. ನಗರದಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್‌ ನಲ್ಲಿ ಘಟನೆ ನಡೆದಿದೆ.

32 ವರ್ಷದ ಆಶಾ ಮೃತ ದುರ್ದೈವಿ. ದೊಣ್ಣೆಯಿಂದ ಹೊಡೆದು ತಂದೆ ರಮೇಶ್‌ ಕೊಲೆ ಮಾಡಿದ್ದಾರೆ. ಆರೋಪಿ ರಮೇಶ್‌ ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದುವೆ ಬಳಿಕ ಪತಿಯನ್ನು ಬಿಟ್ಟು ತವರು ಮನೆಯಲ್ಲೇ ಇದ್ದಳು. ಇದೇ ವಿಚಾರಕ್ಕೆ ರಾತ್ರಿ ತಂದೆ, ಮಗಳ ನಡುವೆ ಜಗಳ ಆಗಿತ್ತು. ಈ ವೇಳೆ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top