ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ರಾಜೇಶ್ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.16. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ರಾಜೇಶ ಅಲಿಯಾಸ್ ಕರಿಯ ರಾಜೇಶ ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.


ಕೆ.ಜಿ.ನಗರದ ರೌಡಿ ರಾಜೇಶ್, 2006ರಿಂದ ದರೋಡೆ, ಮಾದಕ ದ್ರವ್ಯ ಮಾರಾಟ, ಕೊಲೆಗೆ ಸಂಚು, ಕೊಲೆಗೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.


ಕುಖ್ಯಾತ ರೌಡಿ ಪರಂದಾಮ ಮತ್ತು ಬಾಂಬೆ ರವಿ ಸಹಚರರಾಗಿದ್ದ. ಈತನ ವಿರುದ್ಧ ಕಾಟನ್‌ಪೇಟೆ, ಹನುಮಂತನಗರ, ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ, ಕೊಲೆಗೆ ಸಂಚು ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.

Also Read  ಮಂಡ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್‌ ಹರಸಾಹಸ..!

 

error: Content is protected !!
Scroll to Top