ಕಲ್ಲಡ್ಕ: ದ್ವಿತೀಯ ಪಿಯು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಮಾ. 09. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಬಾಳ್ತಿಲ ಗ್ರಾಮ ಪಂಚಾಯತ್‌ ಬಳಿಯ ನಿವಾಸಿ ಚಂದ್ರಶೇಖರ್‌ ಗೌಡರ ಪುತ್ರಿ ವೈಷ್ಣವಿ ಎಂದು ಗುರುತಿಸಲಾಗಿದೆ. ಕಲ್ಲಡ್ಕ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವೈಷ್ಣವಿ ಕಾಲೇಜಿಗೆಂದು ಹೊರಟು ಹೋಗಿ ಏನೋ ಮರೆತು ಹೋಗಿದ್ದೇನೆಂದು ವಾಪಾಸ್‌ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Scroll to Top