ಉಡುಪಿ: ಚೆಕ್‌ ಅಮಾನ್ಯ     ➤ ಆರೋಪಿಗೆ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com  ಉಡುಪಿ, ಮಾ.09. ಡಾ| ವಾದಿರಾಜ್‌ ಪುರಾಣಿಕ್‌ 8 ಲಕ್ಷ ರೂ. ಹಣವನ್ನು ಉದ್ಯಾವರದ ರೋಹಿತ್‌ ಎಸ್‌. ಹೆಗ್ಡೆ ಅವರಿಂದ ಸಾಲವಾಗಿ ಪಡೆದು ಅದಕ್ಕೆ ನೀಡಿದ್ದ ಚೆಕ್‌ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.

ಸಾಲದ ಬಗ್ಗೆ ಆರೋಪಿಯು ದೂರುದಾರರಿಗೆ ನೀಡಿದ ಚೆಕ್‌ಗಳು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ದೂರುದಾರರು ಉಡುಪಿಯ 2ನೇ ಅವರ ಸಿವಿಲ್‌ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ವಿನಾಯಕ ವಾಂಕಂಡ ಅವರು ಆರೋಪಿಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

 

 

Scroll to Top