(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.09. ಉಳ್ಳಾಲ ತಾಲೂಕಿನ ಪಂಡಿತ್ ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ಮಾ. 07 ರ ರಾತ್ರಿ ದಾಳಿ ನಡೆಸಿ ಕಿಂಗ್ ಪಿನ್ ಮಹಿಳೆಯನ್ನ ಬಂಧಿಸಿದ್ದು ,ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾನೆ.
ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ, ಪಿಂಪ್ ರುಕಿಯಾ (50)ಬಂಧಿತ ಆರೋಪಿ. ಮತ್ತೋರ್ವ ಪ್ರಮುಖ ಆರೋಪಿ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ.