ಬಕೆಟ್‌ಗೆ ಬಿದ್ದು ಮಗು ಮೃತ್ಯು !      

(ನ್ಯೂಸ್ ಕಡಬ)newskadaba.com ಹೊಸನಗರ, ಮಾ.06. ಆಟವಾಡುತ್ತಿದ್ದ ಒಂದು ವರ್ಷದ ಮಗು ಬಕೆಟ್‌ನಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಸೊನಲೆಯಲ್ಲಿ ನಡೆದಿದೆ.

ಸೊನಲೆ ಗ್ರಾಮದ ಹರೀಶ್ ಮತ್ತು ವೀಣಾ ದಂಪತಿಯ ಮಗು ಸಂಕೇತ್ ಬೆಳಿಗ್ಗೆ ದನಗಳಿಗೆ ಕೊಡುವ ಮುಸುರೆ ತುಂಬಿದ ಬಕೆಟ್‌ ಬಳಿ ಆಟವಾಡುತ್ತಿರುವಾಗ ತಲೆ ಕೆಳಗಾಗಿ ಬಕೆಟ್‌ನಲ್ಲಿ ಬಿದ್ದು ಮೃತಪಟ್ಟಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮನೆಗೆ ಬಂದು ಮಗು ಹುಡುಕಿದ್ದಾರೆ. ಮುಸುರೆ ಬಕೆಟ್‌ನಲ್ಲಿ ಶವವಾಗಿ ಮಗು ಪತ್ತೆಯಾಗಿದೆ.

 

 

Scroll to Top