ಪುತ್ತೂರು: ಹೋರಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಭಿನ್ನ ಸಮುದಾಯದ ವ್ಯಕ್ತಿಗಳು ➤ ಈರ್ವರು ಪೊಲೀಸ್ ವಶಕ್ಕೆ!

(ನ್ಯೂಸ್ ಕಡಬ)newskadaba.com ಪುತ್ತೂರು, ಮಾ.03. ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದ ಹಿಂದು ಮತ್ತು ಮುಸ್ಲಿಂ  ವ್ಯಕ್ತಿಗಳಿಬ್ಬರನ್ನು ಹಿಂದು ಸಂಘಟನೆ ಕಾರ್ಯಕರ್ತರು ವಿಚಾರಿಸಿದ  ಘಟನೆ ಕೃಷ್ಣನಗರದಲ್ಲಿ  ನಡೆದಿದ್ದು ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಅಹಿತಕರ ಘಟನೆಗಳಾಗದಂತೆ  ನೋಡಿಕೊಂಡಿದ್ದಾರೆ.

ಕೆರೆಮೂಲೆ ನಿವಾಸಿ ಮುಸ್ಲಿಂ ಮತ್ತು ಕೆಮ್ಮಾಯಿಯ ಹಿಂದು ಓರ್ವರು ಸೇರಿಕೊಂಡು ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.

Scroll to Top