➤ ಸಂಜೆ ವಾಕ್ ಮಾಡುವಾಗ ಹಾವು ಕಚ್ಚಿ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com. ನೆಲಮಂಗಲ. ಫೆ.27. ಲೇಔಟ್ ಒಂದರಲ್ಲಿ ಸಂಜೆ ವೇಳೆ ವಾಕ್ ಮಾಡ್ತಿದ್ದ ವ್ಯಕ್ತಿಯೊರ್ವರಿಗೆ   ನಾಗರ ಹಾವೊಂದು ಕಚ್ಚಿತ್ತು.  ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸುವ ವೇಳೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.  ಮೃತರನ್ನು ಸೈಯದ್ ಸಮೀವುಲ್ಲಾ(38)  ಎಂದು ಗುರುತಿಸಲಾಗಿದೆ.

ನೆಲಮಂಗಲ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಗ್ರಾಮದ ನಿವಾಸಿ. ನಿನ್ನೆ ರಾತ್ರಿ ವೇಳೆ ವಾಕ್ ಮಾಡುತ್ತಿದ್ದ ಈತ ಹಾವು ಕಡಿತಕ್ಕೊಳಗಾಗಿ ದಾರುಣ ಸಾವನ್ನಪಿದ್ದಾನೆ. 40 ದಿನದ ಹಿಂದಷ್ಟೆ ಮಗುವಿಗೆ ತಂದೆಯಾಗಿದ್ದ ಈತ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು, ತನ್ನ ಕುಟುಂಬವನ್ನ ತೊರೆದು ಇಹಲೋಕ ತ್ಯಜಿಸಿ, ಪರಲೋಕ ವಾಸಿಯಾಗಿದ್ದಾನೆ. ಇನ್ನು ಸರಿಯಾದ ಸಮಯಕ್ಕೆ 1೦8 ಆಂಬುಲೆನ್ಸ್ ಸಿಗದಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top