ಮಂಗಳೂರು: ಸತ್ತ ಡಾಲ್ಫಿನ್ ಮೀನು ತಣ್ಣೀರು ಬಾವಿ ಕಿನಾರೆಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.25. ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿದೆ. ಮಧ್ಯಾಹ್ನ ಎರಡು ಗಂಟೆಯ ವೇಳೆ ಅಲೆಗಳ ಜೊತೆಯಲ್ಲಿ ಮೀನಿನ ಮೃತದೇಹ ದಡಕ್ಕೆ ಸೇರಿದೆ. ಸಂಜೆ ವೇಳೆ ಹೊಂಡ ತೋಡಿ ಸಮುದ್ರದ ಬದಿಯಲ್ಲೇ ಹೂತು ಹಾಕಲಾಯಿತು.


ಫಾತಿಮಾ ಚರ್ಚ್‌ ಭಾಗದಲ್ಲಿ ಭಾರಿ ಗಾತ್ರದ ಮೀನು ದಡಕ್ಕೆ ಬಂದು ಬಿದ್ದಾಗ ಅಲ್ಲಿದ್ದವರು ಕುತೂಹಲದಿಂದ ಅದರತ್ತ ಓಡಿದ್ದರು. ಫೆರಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಬ್ಲೂ ಫ್ಲ್ಯಾಗ್ ಯೋಜನೆಯ ಕಾರ್ಮಿಕರು, ತಣ್ಣೀರು ಬಾವಿ ಬೀಚ್‌ ನಿರ್ವಹಣೆ ಮಾಡುತ್ತಿರುವ ಯೋಜಕ್‌ ಸಂಸ್ಥೆಯ ಸಿಬ್ಬಂದಿ ಮತ್ತು ಲೈಫ್ ಗಾರ್ಡ್‌ಗಳು ಮೀನಿನ ಶವವನ್ನು ಹಗ್ಗದಲ್ಲಿ ಕಟ್ಟಿ ಎಳೆದು ಮರಳಿನ ಮೇಲೆ ತಂದಿಟ್ಟರು.

Also Read   ಕಾಸರಗೋಡು: ಆಫ್ರಿಕನ್‌ ಹಂದಿ ಜ್ವರ ಪತ್ತೆ ಪ್ರಕರಣ.!! ➤  500 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಆದೇಶ           

error: Content is protected !!
Scroll to Top