ಪ್ರತಿಷ್ಠಿತ ಟೆಲಿಕಾಂ ಕಂಪನಿ ‘ಎರಿಕ್ಸನ್’ ಉದ್ಯೋಗಿಗಳಿಗೆ ಬಿಗ್ ಶಾಕ್…! ➤ 8500 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಟೆಲಿಕಾಂ ಹಾರ್ಡ್ವೇರ್ ತಯಾರಕ ಎರಿಕ್ಸನ್ ನೌಕರರ ವಜಾಕ್ಕೆ ಮುಂದಾಗಿದ್ದು, ಕಂಪನಿಯು ತನ್ನ ವೆಚ್ಚವನ್ನ ಕಡಿತಗೊಳಿಸಲು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲಿದೆ.

ಈ ನಿಟ್ಟಿನಲ್ಲಿ ಕಂಪನಿಯು ತನ್ನ ನೌಕರರಿಗೆ ಮೆಮೊ ನೀಡಿದೆ. ಎರಿಕ್ಸನ್ ಸ್ವೀಡನ್’ ನಲ್ಲಿ 1400 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿತು. ಆದ್ರೆ, ಕೆಲವು ದಿನಗಳ ನಂತ್ರ ಕಂಪನಿಯು ವಿಶ್ವಾದ್ಯಂತ 8500 ಉದ್ಯೋಗಿಗಳನ್ನ ವಜಾಗೊಳಿಸಲು ನಿರ್ಧರಿಸಿದೆ.

error: Content is protected !!
Scroll to Top