➤ ಬೆಳ್ತಂಗಡಿ ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com. ಬೆಳ್ತಂಗಡಿ. ಫೆ.25. ಶಿರ್ಲಾಲು ಗ್ರಾಮ ಪಂಚಾಯತ್  ವ್ಯಾಪ್ತಿಯ ಕರಂಬಾರು ಬಂತಡ್ಕದ ಜನತೆಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಪಂಚಯತ್ ಬಳಿ ನೀರಿನ ಕೊಡ, ಬಕೆಟ್ ಗಳ ಜೊತೆಗೆ ಪ್ರತಿಭಟನೆ ನಡೆಸಿದರು.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕದ ಜನತೆಗೆ ನಾಲ್ಕೈದು ದಿನಗಳಿಂದ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಈ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ. ಈ ಸಂಬಂಧ ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡು ತಮ್ಮ ಅಕ್ರೋಶ ಹೊರ ಹಾಕಿದರು.

Scroll to Top