ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ – ಏಳು ವರ್ಷಗಳ ಕಾಲ ಮೋದಿಯೇ ಪ್ರಧಾನಿ ► ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

(ನ್ಯೂಸ್ ಕಡಬ) newskadaba.com ಉಡುಪಿ ಡಿ.30. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರ ಅಧಿಕಾರ ನಡೆಸಲಿದ್ದು, ವರ್ಷದೊಳಗೆ ಪತನವಾಗಲಿದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ಸಿಎಂ ಮತ್ತು ಬಿಜೆಪಿಯ ಆರೋಪ ಪ್ರತ್ಯಾರೋಪದ ಬಗ್ಗೆ ಶಾಸ್ತ್ರದ ಪ್ರಕಾರ ಮಾತನಾಡಿದ ಅವರು ಹೇವಿಳಂಬಿ ಸಂವತ್ಸರದಲ್ಲಿ ಕರ್ನಾಟಕ ಮತ್ತೊಂದು ಗೋದ್ರಾವಾಗಲಿದೆ. ಮುಂದಿನ ಏಳು ವರ್ಷಗಳ ಕಾಲ ನರೇಂದ್ರ ಮೋದಿಯನ್ನು ಯಾರಿಂದಲೂ ಮುಟ್ಟೋದಕ್ಕೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುವುದನ್ನು ಬಿಟ್ಟು ಬಿಡಿ ಎಂದಿದ್ದಾರೆ.

ಭಾರತದಲ್ಲಿ ಹಿಂದುತ್ವಕ್ಕೆ ಬೆಲೆಕೊಡುವ ಪಕ್ಷಕ್ಕೆ ಭವಿಷ್ಯವಿದ್ದು, ರಾಜಕೀಯ ವಿಶ್ಲೇಷಕರು ರಾಜಕಾರಣಿಗಳಿಗೆ ಕಿವಿಮಾತು ಹೇಳಬೇಕು. ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಬೆಲೆ ಸಿಗದಿದ್ದರೆ ಬಹುಸಂಖ್ಯಾತರು ಒಂದಲ್ಲ ಒಂದು ದಿನ ತಿರುಗಿ ಬೀಳಲಿದ್ದಾರೆ ಎಂದು ಗುಜರಾತ್ ಫಲಿತಾಂಶ ಪ್ರಕಟವಾಗುವ ಮುನ್ನ ನಿಖರ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

Also Read  ಉಪಚುನಾವಣೆ- ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ನಾಮಪತ್ರ ಸಲ್ಲಿಕೆ

error: Content is protected !!
Scroll to Top