ನಟಿ ರಾಖೀ ಸಾವಂತ್‌ ಪತಿ ಫೆ.27 ರವರೆಗೆ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ)newskadaba.com ಮೈಸೂರು, ಫೆ.23. ಇರಾನ್‌ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣ ಸಂಬಂಧ ನಟಿ ರಾಖೀ ಸಾವಂತ್‌ ಪತಿ ಆದಿಲ್‌ ಖಾನ್‌ ದುರಾನಿಯನ್ನು ಫೆ.27 ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಮೈಸೂರು ನ್ಯಾಯಾಲಯ ಆದೇಶಿಸಿದೆ.

ಈ ದೂರಿನ ಮೇರೆಗೆ ರಾಖೀ ಸಾವಂತ್‌ ಪತಿ ಆದಿಲ್‌ ಖಾನ್‌ ವಿರುದ್ಧ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಆದಿಲ್‌ ಖಾನ್‌ ದುರಾನಿಯನ್ನು ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು.

 

Scroll to Top