(ನ್ಯೂಸ್ ಕಡಬ)newskadaba.com ವಿಜಯಪುರ, ಫೆ.22. ಕಾಲುವೆಯಲ್ಲಿ ಜಾರಿಬಿದ್ದು ಬಾಲಕ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಚಿಕ್ಕ ಅಸಂಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಲ್ಲಯ್ಯ ಹಿರೇಮಠ(13) ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕ. ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ, ಬಳಿಕ ತಂದೆಯನ್ನ ಕಾಣಲು ಜಮೀನಿಗೆ ತೆರಳಿದ್ದ. ಈ ಹಿಂದೆಯೂ ತಂದೆಯಿಂದ ಜಮೀನಿಗೆ ಹೋಗುತ್ತಿದ್ದ ಬಾಲಕ. ಈಜು ಬಾರದ ಬಾಲಕ ಕಾಲುವೆಯಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ.









