ಅಂತರ್ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಕರಾಟೆ ಚಾಂಪಿಯನ್‌ಶಿಪ್ ► ಕಡಬದ ಕು| ಯಾನ್ವಿತಾ ಯಂ.ಕೆ. ಪ್ರಥಮ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.28. ಕಮಲ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಮಂಗಳೂರಿನ ಕೆಪಿಟಿಯಲ್ಲಿ ನಡೆದ ಜೂನಿಯರ್ ವಿಭಾಗದ ಕರ್ನಾಟಕ ಮತ್ತು ಕೇರಳ ಅಂತರ್ರಾಜ್ಯ ಒಪನ್ ಕರಾಟೆ ಚಾಂಪಿಯನ್‌ ಶಿಪ್ ಸ್ಪರ್ಧೆಯಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿ ಕು| ಯಾನ್ವಿತಾ ಯಂ.ಕೆ. ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ.

ಮರ್ದಾಳ ತನು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ, ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷರೂ ಆದ ಮಂಜುನಾಥ ಕೋಲಂತಾಡಿ ಮತ್ತು ಪದ್ಮಾ ದಂಪತಿಯ ಪುತ್ರಿಯಾಗಿರುವ ಈಕೆಗೆ ಕರಾಟೆ ಶಿಕ್ಷಕರಾದ ಯಾದವ ನಾಯ್ಕ್ ಬೀರಂತಡ್ಕರವರ ಮಾರ್ಗದರ್ಶನ ನೀಡಿರುತ್ತಾರೆ.

Also Read  ಕಚೇರಿ ಆಡಳಿತ ಮತ್ತು ರಿಟೈಲ್ ಸೇಲ್ಸ್ ಕೋರ್ಸ್ ಇದರ ವತಿಯಿಂದ ಉಚಿತ ತರಬೇತಿ

error: Content is protected !!
Scroll to Top