ಮಲೇರಿಯಾ ಮುಕ್ತದತ್ತ “ಕರಾವಳಿ’ !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಫೆ.15. ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣ ಕಂಡುಬರುತ್ತಿದ್ದ ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಗಣನೀಯ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ 4 ಸಾವಿರಕ್ಕೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪ್ರಕರಣ 168ಕ್ಕೆ, ಉಡುಪಿ ಜಿಲ್ಲೆಯಲ್ಲಿ 2,217ರಿಂದ 18ಕ್ಕೆ ಇಳಿಕೆ ಕಂಡಿದೆ.

ಉಭಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯತಂತ್ರಗಳು ಫಲಿಸುತ್ತಿವೆ. ಪ್ರಕರಣ ಕಂಡುಬಂದರೆ 1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗುತ್ತಿದೆ.

ಆರೋಗ್ಯ ಇಲಾ ಖೆಯ ವಿಶೇಷ ತರಬೇತಿ ಹೊಂದಿದ ಕಾರ್ಯ ಕರ್ತರು ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡ ಪ್ರದೇಶಕ್ಕೆ ತೆರಳಿ ಸಾರ್ವಜನಿಕರಿಗೆ ಮತ್ತು ಕಾರ್ಮಿಕರಿಗೆ ಮಲೇರಿಯಾ ಪರೀಕ್ಷೆ ಮಾಡುತ್ತಿದ್ದಾರೆ.

Also Read  ಬ್ಯಾಟರಿ ಕಳಚಿದ ಕೂಡಲೇ ರೆಡ್‌ಮೀ ಮೊಬೈಲ್ ಬ್ಲಾಸ್ಟ್ ..!!! ► ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

 

error: Content is protected !!
Scroll to Top