➤ ಪ್ರೇಯಸಿಯ ಕೊಲೆ ಮಾಡಿ, ಶವವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟ ಯುವಕ

(ನ್ಯೂಸ್ ಕಡಬ) newskadaba.com. ದೆಹಲಿ, ಫೆ.15. ಶ್ರದ್ಧಾ ವಾಕರ್ ಹತ್ಯೆ ಸುದ್ದಿ ಮಾಸುವ ಮುನ್ನ ಮತ್ತೊಂದು ಭೀಕರ ಹತ್ಯೆ ನಡೆದುಬಿಟ್ಟಿದೆ. ಲಿವ್​ ಇನ್​ ಸಂಬಂಧದಲ್ಲಿದ್ದ ಸಂಗಾತಿಯನ್ನು ಹತ್ಯೆ ಮಾಡಿ ಹಾಸಿಗೆಯ  ಕೆಳಗೆ ಬಚ್ಚಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪಾಲಘಡದಲ್ಲಿ ಈ ಘಟನೆ ನಡೆದಿದೆ, ಆರೋಪಿಯು ತನ್ನ ಪ್ರೇಯಸಿಯನ್ನು ಕೊಂದು ರಾಜ್ಯದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮಂಗಳವಾರ ಮಧ್ಯಪ್ರದೇಶದ ರೈಲಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ, ಪಾಲಘಡ ಜಿಲ್ಲೆಯ ತುಲಿಂಜ್ ಪ್ರದೇಶದ ಮನೆಯೊಳಗೆ ಹಾಸಿಗೆಯ ಕೆಳಗೆ ಮೇಘಾ (37) ಶವವನ್ನು ವಶಪಡಿಸಿಕೊಳ್ಳಲಾಗಿದೆ.

Scroll to Top