ಟರ್ಕಿ ಭೂಕಂಪ! ಕಾಣೆಯಾಗಿದ್ದ ಬೆಂಗಳೂರಿನ ಟೆಕ್ಕಿಯೋರ್ವನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಟರ್ಕಿ, ಫೆ.13. ಟರ್ಕಿಯಲ್ಲಿ ಉಂಟಾದ ಭೂಕಂಪದಲ್ಲಿ ಓರ್ವ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದೀಗ ಆ ವ್ಯಕ್ತಿಯ ಶವ ಪತ್ತೆಯಾಗಿದೆ.ಬೆಂಗಳೂರಿನ ನಿವಾಸಿ, ಟೆಕ್ಕಿ ವಿಜಯ್​ ಕುಮಾರ್ ಭೂಕಂಪದಲ್ಲಿ ಸಿಲುಕಿ ನಾಪತ್ತೆಯಾಗಿದ್ದರು ಎಂದು ವರದಿ ತಿಳಿಸಿದೆ.

ವಿಜಯ್​ ಕುಮಾರ್ ಟರ್ಕಿಯ ಮಾಲತ್ಯ ನಗರದ ಹೋಟೆಲ್​ನ 24 ಅಂತಸ್ತಿನ ಹೋಟೆಲ್​ನ 2ನೇ ಮಹಡಿಯಲ್ಲಿ ತಂಗಿದ್ದರು. ಭೂಕಂಪನದ ನಂತರ ಹೋಟೆಲ್​ ಸಂಪೂರ್ಣ ಕುಸಿದಿತ್ತು. ವಿಜಯ್​ ಕುಮಾರ್  ನಾಪತ್ತೆಯಾಗಿದ್ದರು. ಆದರೆ  ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಟೆಕ್ಕಿಯ ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿದ್ದವು. ಈಗ ವಿಜಯ ಕುಮಾರ್​ ಶವ ಪತ್ತೆಯಾಗಿದೆ ಎಂದು ಟರ್ಕಿಯ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಕೈಯಲ್ಲಿದ್ದ ಟ್ಯಾಟೊ ಮೂಲಕ ಮೃತದೇಹ ಪತ್ತೆಯಾಗಿದೆ. ಉತ್ತರಾಖಂಡ್‌ನಲ್ಲಿರುವ ಕುಟುಂಬ ಸದಸ್ಯರು ವಿಜಯ ಕುಮಾರ್​ನನ್ನು ಗುರುತಿಸಲು ಟೆಕ್ಕಿಯ ಎಡಗೈಯಲ್ಲಿದ್ದ ಟ್ಯಾಟೋ ಫೋಟೋ ಕಳುಹಿಸಿದ್ದರು. ಈ ಗುರುತಿನ ಮೂಲಕ ವಿಜಯ ಕುಮಾರ್ ಪತ್ತೆಯಾಗಿದ್ದಾರೆ. ದುರಾದೃಷ್ಟವಶಾತ್​ ಅವರು ಮೃತಪಟ್ಟಿದ್ದಾರೆ. ವಿಜಯ್ ಕುಮಾರ್​ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.

 

error: Content is protected !!

Join the Group

Join WhatsApp Group