➤ ಅಂಗನವಾಡಿಯಲ್ಲಿ ಬಿಸಿ ಸಾಂಬಾರ್‌ಗೆ ಬಿದ್ದು 6 ವರ್ಷದ ಬಾಲಕಿ ಗಂಭೀರ

(ನ್ಯೂಸ್ ಕಡಬ) newskadaba.com. ಮಂಡ್ಯ.  ಫೆ.11.ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಬಿಸಿ ಸಾಂಬಾರ್‌ಗೆ ಬಿದ್ದು 6 ವರ್ಷದ ಬಾಲಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ಬಾಲಕಿಯನ್ನು  ನಿಹಾರಿಕ ಎಂದು ಗುರುತಿಸಲಾಗಿದೆ. ದಾವಣಗೆರೆ ಮೂಲದ ಮಂಜುನಾಥ್ ಮತ್ತು ಪೂಜಾ ದಂಪತಿಯ 6ವರ್ಷದ ಬಾಲಕಿ ಎಂದು ತಿಳಿಯಲಾಗಿದೆ.  ಊಟದ ಸಮಯದಲ್ಲಿ ನಿಹಾರಿಕಾ ವಾಟರ್ ಬಾಟಲ್ ತರಲು ಓಡಿದಾಗ ಎದುರಿನಿಂದ ಊಟ ಬಡಿಸಲು ಅಂಗನವಾಡಿಯ ಆಯಾ ಲಕ್ಷ್ಮಿ ಸಾಂಬಾರು ತರುವಾಗ ಡಿಕ್ಕಿಯಾಗಿ ಕೈಯಿಂದ ಪಾತ್ರ ಜಾರಿ ಬಿದ್ದು ಸುಟ್ಟು ಗಾಯವಾಗಿದೆ. ಘಟನೆ ಕಂಡು ಅಂಗನವಾಡಿ ವಿರುದ್ಧ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top