ಕನ್ನಡ ಹೋರಾಟಗಾರರ ಮೇಲೆ ರೌಡಿಶೀಟ್ ಹಾಕಿದ ಪೊಲೀಸ್ ➤‌ ಕನ್ನಡಿಗರ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಳಗಾವಿ, ಫೆ.11. ಕಳೆದ ವರ್ಷದ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದ ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ನಗರ ಪೊಲೀಸರು ಹೊಸದಾಗಿ ರೌಡಿಶೀಟ್ ತೆರೆದಿದ್ದಾರೆ ಎಂದು ವರದಿಯಾಗಿದೆ.

ಚುನಾವಣೆ ಹೊಸ್ತಿಲಲ್ಲಿ ರಾಜ್ಯಸರ್ಕಾರದ ಹಾಗೂ ಬೆಳಗಾವಿ ಪೊಲೀಸರ ನಡಿಗೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕನ್ನಡ ನಾಡಿನ ಪರ ಹೋರಾಟ ಮಾಡುವುದೇ ತಪ್ಪೆ? ಚಿಕ್ಕ ವಯಸ್ಸಿನ ಹುಡುಗರ ಮೇಲೆ ರೌಡಿ ಶೀಟರ್‌ ಹಾಕುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Also Read  JDS ಗೆ ಬಹುಮತ ಸಿಗದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ.. !‌ ➤ಎಚ್.ಡಿ ಕುಮಾರಸ್ವಾಮಿ

error: Content is protected !!
Scroll to Top