ಕಾರಿನ ಮೇಲೆ ನಿಯಂತ್ರಣ ತಪ್ಪಿ ಬಿದ್ದ ಕಾಂಕ್ರಿಟ್ ಲಾರಿ   ➤ ತಾಯಿ‌- ಮಗಳು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.02. ಕಾಂಕ್ರೀಟ್ ಲಾರಿ ನಿಯಂತ್ರಣ ತಪ್ಪಿ ಕಾರಿ‌ನ‌ ಮೇಲೆ ಪಲ್ಟಿಯಾದ ಪರಿಣಾಮ ತಾಯಿ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಬನ್ನೇರುಘಟ್ಟ ಸಮೀಪದ ಬ್ಯಾಲ ಮರದದೊಡ್ಡಿ ಬಳಿ ನಡೆದಿದೆ.

ಗಾಯತ್ರಿಕುಮಾರ್ (47) ಸಮತಾ (16)ಮೃತರು.‌ಗಾಯತ್ರಿ ತಮ್ಮ ಮಗಳನ್ನು ಬನ್ನೇರುಘಟ್ಟ ಸಮೀಪದ ಬಸವನಪುರ ಬಳಿ ಇರುವ ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುತ್ತಿದ್ದ ಲಾರಿಯು ತಿರುವಿನಲ್ಲಿ ಅತಿವೇಗವಾಗಿ ಬಂದು ನಿಯಂತ್ರಣ ತಪ್ಪಿ ಕಾರಿನ‌ ಮೇಲೆ ಬಿದ್ದಿದೆ. ಲಾರಿ ಬಿದ್ದ ರಭಸಕ್ಕೆ ಕಾರು ಸಂಫೂರ್ಣವಾಗಿ ಜಖಂ ಆಗಿದೆ ಎಂದು ವರದಿ ತಿಳಿಸಿದೆ.

 

Scroll to Top