(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.28. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) 25 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಲು ಟೆಂಡರ್ ಆಹ್ವಾನಿಸಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಒಂದೇ ದಿನದಲ್ಲಿ ಗೋಧಿ ಬೆಲೆ ಶೇ. 6-9ರಷ್ಟು ಕುಸಿತ ಕಂಡಿದೆ.
ಈ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ (ಆಟ್ಟಾ) ಬೆಲೆ 10 ದಿನಗಳಲ್ಲಿ ಇಳಿಕೆಯಾಗುವ ಎಲ್ಲಾ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಗೋಧಿ ದಾಸ್ತಾನು ನಾಲ್ಕು ಮಿಲ್‌ಗಳಿಗೆ ತಲುಪಲು ಪ್ರಾರಂಭವಾಗುತ್ತಿದ್ದಂತೆ ಬೆಲೆಗಳು ಮತ್ತಷ್ಟು ಇಳಿಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಮತ್ತು ಟ್ರೇಡರ್‌ಗಳು ನಿರೀಕ್ಷಿಸುತ್ತಿದ್ದಾರೆ.