➤ ನಕಲಿ ‌ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.27. ಬೆಂಗಳೂರು: ಇದೀಗ ದೊಡ್ಡ ಪ್ರಮಾಣದಲ್ಲಿ ನಕಲಿ ಮಾರ್ಕ್ಸ್​ ಕಾರ್ಡ್​ ತಯಾರು ಮಾಡುತ್ತಿದ್ದ ಬೃಹತ್​ ಜಾಲ ಬೆಳಕಿಗೆ ಬಂದಿದ್ದು, ಒಮ್ಮೆಗೆ ಎಲ್ಲಾ ವಿಶ್ವವಿದ್ಯಾಲಯಗಳು ಬೆಚ್ಚಿ ಬೀಳುವಂತೆ ಮಾಡಿದೆ. ಈ ಪ್ರಕರಣ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದು ‘ಒಂದೂವರೆ ತಿಂಗಳ ಹಿಂದೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನ ಸಿಸಿಬಿ ಪತ್ತೆ ಮಾಡಿತ್ತು.

ಇದರ ಮುಂದುವರೆದ ಭಾಗವಾಗಿ ಸಿಸಿಬಿ ಕಾರ್ಯಾಚಾರಣೆ ಮಾಡಿತ್ತು. ಇದೇ ರೀತಿ ನಕಲಿ ಮಾರ್ಕ್ಸ್ ಮಾಡುತ್ತಿದ್ದ ಐದು ಸಂಸ್ಥೆಗಳ ವಿರುದ್ದ. ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಇವು 15 ವಿಶ್ವ ವಿದ್ಯಾಲಯ ಹಾಗೂ ಸಂಸ್ಥೆಗಳಿಗೆ ಸಬಂಧಿಸಿದ ಮಾರ್ಕ್ಸ್ ಕಾರ್ಡಗಳಾಗಿದ್ದು ಒರ್ವ ಆರೋಪಿಯನ್ನ ಪೊಲೀಸ್ರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಯಾರಾದರು ಈ ರೀತಿಯ ನಕಲಿ ಮಾರ್ಕ್ಸ್ ಕಾರ್ಡ್ ಬಳಸ್ತಾ ಇದ್ರೆ ಅವರಿಗೆ ಸಂಕಷ್ಟ ಎದುರಾಗಲಿದೆ. ಇಂತಹ ಸಂಸ್ಥೆಗಳಿಂದ ದೂರ ಇರಬೇಕು’ ಎಂದು ಸಾರ್ವಜನಿಕರಲ್ಲಿ ಕಮೀಷನರ್ ಮನವಿ ಮಾಡಿದ್ದಾರೆ.

Also Read  ಸುಳ್ಯ: ಕ್ಯಾಂಪಸ್‌ ಫ್ರಂಟ್‌ ವತಿಯಿಂದ ಡ್ರಗ್ಸ್‌ ಕಡಿವಾಣಕ್ಕೆ ಒತ್ತಾಯ

ರಾಜಾಜಿನಗರದ, ನ್ಯೂ ಕ್ವೆಸ್ಟ್ ಟೆಕ್ನಾಲಿಜಿಸ್, ಜೆಪಿನಗರದ ಸಿಸ್ಟಮ್ ಕ್ವೆಸ್ಟ್, ಭದ್ರಪ್ಪ ಲೇಔಟ್, ಆರೋಹಿ ಇನ್ಸಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್, ಹಾಗೂ ವಿಜಯನಗರದ ಬೆನಕಾ ಕರೆಸ್ಪಾಂಡೆನ್ಸ್ ಕಾಲೇಜ್ ಮೇಲೆ ದಾಳಿ ಮಾಡಿದಾಗ ಸಿಸಿಬಿ ನಕಲಿ‌ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ ಮಾಡಿತ್ತು. ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 6800 ನಕಲಿ ಮಾರ್ಕ್ಸ್ ಕಾರ್ಡಗಳು ಪತ್ತೆಯಾಗಿದ್ದು ಈ ವೇಳೆ ಕಂಪ್ಯೂಟರ್ , ಲ್ಯಾಪಟಾಪ್ ಹಾಗೂ 13 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

error: Content is protected !!
Scroll to Top