ಅರಣ್ಯದಲ್ಲಿ ನಿಗೂಢವಾಗಿ ಸಿಕ್ಕ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!

(ನ್ಯೂಸ್ ಕಡಬ)newskadaba.com ಭುವನೇಶ್ವರ, ಜ.25. ಒಡಿಶಾದ ಗ್ರಾಮವೊಂದರ ಸಮೀಪದ ಅರಣ್ಯದಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್ ತೆರೆದ ಪೊಲೀಸರು ಅದರಲ್ಲಿದ್ದ ವ್ಯಕ್ತಿಯೊಬ್ಬನ ಶವವನ್ನು ಕಂಡು ಶಾಕ್​ ಆಗಿದ್ದಾರೆ. ಈ ಘಟನೆ ಖೋರ್ಧಾ ಜಿಲ್ಲೆಯ ನಚುನಿ ಪೊಲೀಸ್​ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದ ಸಮೀಪ ಇರುವ ಅರಣ್ಯದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮನೋರಂಜನ್​ ಮೋಹಪಾತ್ರ (32) ಎಂದು ಗುರುತಿಸಲಾಗಿದೆ. ಆತ ರಣಪುರ್ ಬ್ಲಾಕ್ ಅಡಿಯಲ್ಲಿ ಬರುವ ಬಲಭದ್ರಪುರ ಪಂಚಾಯತ್‌ನ ಲಖಪದ ಗ್ರಾಮದ ಗಂಗಾಧರ್ ಅವರ ಪುತ್ರ. ಉರುವಲು ಸಂಗ್ರಹಿಸಲು ಕಾಡಿಗೆ ತೆರಳಿದ್ದ ವೇಳೆ ನಿಗೂಢ ಸ್ಥಿತಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನ್ನು ಕೆಲ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Also Read  ಇಚಿಲಂಪಾಡಿ: ಬೈಕ್ ಢಿಕ್ಕಿ ► ಪಾದಚಾರಿ ಮಹಿಳೆ ಮೃತ್ಯು

error: Content is protected !!
Scroll to Top