ಬೇಲ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ಮುರುಘಾ ಸ್ವಾಮಿಗೆ ಶಾಕ್ ಕೊಟ್ಟ ಪೊಲೀಸರು..!

(ನ್ಯೂಸ್ ಕಡಬ)newskadaba.com ಚಿತ್ರದುರ್ಗ, ಜ.25. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನಲೆ, ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ದ ಎರಡು ಫೋಕ್ಸೋ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಮುರುಘಾ ಸ್ವಾಮಿ ಬಂಧನವಾಗಿ ಜೈಲು ಸೇರಿ ಬರೋಬ್ಬರಿ ಐದು ತಿಂಗಳು ತುಂಬುತ್ತಿದೆ.

ಜೈಲಲ್ಲಿರುವ ಸ್ವಾಮಿ ಬೇಲ್ ಪಡೆದು ಹೊರ ಬರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ‌. ಆದರೀಗ ಬೇಲ್ ನಿರೀಕ್ಷೆಯಲ್ಲಿದ್ದ ಮುರುಘಾ ಸ್ವಾಮಿಗೆ ಪೋಲೀಸರು ಎರಡನೇ ಫೋಕ್ಸೋ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿ ಮತ್ತೆ ಶಾಕ್ ನೀಡಿದ್ದಾರೆ.

Scroll to Top