ಕೆಎಸ್ಆರ್ಟಿಸಿ ಬಸ್ -ಬೈಕ್ ಡಿಕ್ಕಿ ➤ ಇಬ್ಬರು ಸ್ಥಳದಲ್ಲೇ ದುರ್ಮರಣ..!

ನ್ಯೂಸ್ ಕಡಬ) newskadaba.com. ಬಾಗಲಕೋಟ, ಜ. 20.  ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಕೆಎಸ್ ಆರ್ ಟಿಸಿ ಬಸ್  ಹಾಗೂ ಬೈಕ್  ಮುಖಾಮುಖಿ ಡಿಕ್ಕಿಯಾಗಿ  ಬೈಕ್ ಮೇಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿ ಘಟಪ್ರಭಾ ಸೇತುವೆ ಮೇಲೆ ಈ ದುರಂತ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ನಜ್ಜುಗುಜ್ಜು ಅಗಿದೆ.

ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲಿದ್ದ ಇಬ್ಬರೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್ ಲೋಕಾಪುರದಿಂದ ಮುಧೋಳ ಮಾರ್ಗ ಹೊರಟಿತ್ತು. ಇನ್ನು ಬಸ್ ಮುಧೋಳದಿಂದ ಲೋಕಾಪುರ ಕಡೆ ಬರುತ್ತಿತ್ತು ಎಂದು ತಿಳಿದು ಬಂದಿದೆ.

Scroll to Top