ಸುಬ್ರಹ್ಮಣ್ಯ: ಆಯ್ದ ಶಾಲೆಗಳಲ್ಲಿ ಈ ವರ್ಷದಿಂದಲೇ ನೂತನ ಶಿಕ್ಷಣ ಜಾರಿ ➤ ಸಚಿವ ಬಿ.ಸಿ ನಾಗೇಶ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, . 19. ರಾಜ್ಯದಲ್ಲಿ ಈ ವರ್ಷದಿಂದ ಆಯ್ದ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಶಿಕ್ಷಣ ನೀತಿ ಅನುಷ್ಠಾನದಿಂದ ಭಾರತೀಯ ಶಿಕ್ಷಣ ಕ್ಷೇತ್ರವು ಮತ್ತೆ ಪರಮ ವೈಭವವನ್ನು ಪಡೆಯಲಿದೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಈಗಾಗಲೇ ದಿನಾಂಕ ಘೋಷಿಸಿದ್ದು, ಪರೀಕ್ಷಾ ಪೂರ್ವಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಅತಿಥಿ ಶಿಕ್ಷಕರಿಗೆ ವೇತನ ಪಾವತಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಅತಿಥಿ ಶಿಕ್ಷಕರಿಗೆ ಒಂದೆರಡು ತಿಂಗಳು ವಿಳಂಬವಾಗಬಹುದು ಅಥವಾ ಆರಂಭದಲ್ಲಿ ತಡವಾಗಬಹುದು ಹೊರತು ವೇತನ ಪಾವತಿ ಆಗದೇ ಇರುವುದಿಲ್ಲ ಹೇಳಿದ್ದಾರೆ.

Also Read  ದೀಪಕ್ ರಾವ್ ಕೊಲೆ ಪ್ರಕರಣ ► ಇನ್ನಿಬ್ಬರು ಆರೋಪಿಗಳ ಬಂಧನ

error: Content is protected !!
Scroll to Top